ಸಜೀಪಮೂಡ : ಮಾಜಿ ಸಚಿವ ಬಿ.ರಮನಾಥ ರೈ ಅವರ ಮಾರ್ಗದರ್ಶನದಲ್ಲಿ, ತಾಲೂಕು ಪಂಚಾಯಿತಿ ಸದಸ್ಯ ಕೆ.ಸಂಜೀವ ಪೂಜಾರಿಯವರ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಅವರ ಸಹಕಾರದೊಂದಿಗೆ ಸಜೀಪಮುಡ ಗ್ರಾಮ ಪಂಚಾಯತಿ, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘ, ಎನ್ ವಿ.ಡಿಜಿಟಲ್ಸ್ ಮೆಲ್ಕಾರ್ ಇವರ ಸಹಯೋಗದಲ್ಲಿ ಸಜೀಪ ಮೂಡ ಗ್ರಾಮದ ಎಲ್ಲಾ ಮನೆಗಳಿಗೆ ಅಕ್ಕಿ ವಿತರಣ ಕಾರ್ಯಕ್ರಮಕ್ಕೆ ಸಜೀಪಮೂಡ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಹಾಗೂ ಬೊಳ್ಳಾಯಿಯಲ್ಲಿ ಚಾಲನೆ ನೀಡಲಾಯಿತು.
ಮಾಜಿ ಸಚಿವ ಬಿ. ರಮನಾಥ ರೈಯವರು ಮನೆಮನೆಗಳಿಗೆ ತೆರಳಿ ತಲಾ ೧೦ ಕೆ.ಜಿ.ಯಂತೆ ಅಕ್ಕಿಯನ್ನು ವಿತರಿಸಿದರು. ಸಜೀಪಮೂಡ ಗ್ರಾಮದಲ್ಲಿ ಒಟ್ಟು ೨೫೦೦ ರಷ್ಟು ಮನೆಗಳಿದ್ದು ಬಡವ ಶ್ರೀಮಂತರೆನ್ನದೆ ಎಲ್ಲಾ ಮನೆಗಳಿಗೂ ಒಟ್ಟು ೨೫೦ ಕ್ವಿಂಟಲ್ ಅಕ್ಕಿಯನ್ನು ವಿತರಿಸಲಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲಾ ಮನೆಗಳಿಗೂ ಅಕ್ಕಿ ತಲಿಪಲಿದೆ ಎಂದು ತಾ.ಪಂ.ಸದಸ್ಯ ಸಂಜೀವ ಪೂಜಾರಿ ತಿಳಿಸಿದ್ದಾರೆ. ಮಂಗಳವಾರ ಬೊಳ್ಳಾಯಿ, ಜಾರಕೋಡಿ, ನಗ್ರಿ, ಪಣೋಲಿ ಬೈಲು, ಕಂಚಿಲ ಗುರುಮಂದಿರ ಪರಿಸರದಲ್ಲಿ ಅಕ್ಕಿ ವಿತರಿಸಲಾಗಿದೆ. ಈ ಸಂದರ್ಭ ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಮುಖರಾದ ರಮೇಶ್ ಪಣೋಲಿ ಬೈಲು, ಜಯಶಂಕರ ಕಾನ್ಸಾಲೆ, ಸುದೀಪ್ ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್ ಪೆರ್ವ, ಯೋಗೀಶ್ ಬೆಳ್ವಾಡ, ಕರಿಂ ನಗ್ರಿ, ಹಮೀದ್, ಇಕ್ಬಾಲ್ ನಂದಾವರ, ಹಜೀದ್, ಅಬ್ದುಲ್ ಕುಂಞ ಅಶೋಕ್ ಕೋಮಾಲಿ, ರೋಹಿತ್ ಪೂಜಾರಿ ಪಟ್ಟುಗುಡ್ಡೆ, ವಿನೋಧ್ ಪೂಜಾರಿ ಕೊಮಾಲಿ ಮತ್ತಿತರರು ಉಪಸ್ಥಿತರಿದ್ದರು.
ಸಜೀಪಮೂಡ ಗ್ರಾಮದಲ್ಲಿ ಅಕ್ಕಿ ವಿತರಣೆ
