ಫರಂಗಿಪೇಟೆ: ಓಂ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಫರಂಗಿಪೇಟೆ . ಇದರ ವತಿಯಿಂದ ಎ. 26ರಂದು ಆದಿತ್ಯವಾರ ನಿಶ್ಚಯಿಸಿರುವ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕ್ಷೇತ್ರದಲ್ಲಿ ಎ.8 ರಂದು ಬುಧವಾರ ಜರಗಲಿರುವ ವರ್ಷಾವಧಿ ಮಹೋತ್ಸವ ಹಾಗು ಹನುಮಜಯಂತಿ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಕ್ಷೇತ್ರದ ಮಾತೃ ಮಂಡಳಿಯ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ