ಬಂಟ್ವಾಳ: ಬಿ.ಸಿರೋಡಿನ ಬಸ್ಸು ನಿಲ್ದಾಣದ ಹಿಂಭಾಗದಲ್ಲಿನ ಚರಂಡಿಯಲ್ಲಿ ಕೊಳಚೆ ನೀರು ಹರಿಯದೇ ದುರ್ವಾಸನೆ ಬೀರುತ್ತಿದ್ದು ಪುರಸಭೆ ಕಾರ್ಮಿಕರು ಚರಂಡಿಯಲ್ಲಿನ ಕೊಳಚೆ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬಿ.ಸಿ.ರೋಡಿನ ಬಸ್ಸು ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದ ಬಳಿಯೇ ಚರಂಡಿಯಲ್ಲಿ ಸರಿಯಾಗಿ ಕೊಳಚೆ ನೀರು ಹರಿಯದೆ ದುರ್ವಾಸನೆ ಬೀರುತ್ತಿತ್ತು. ಇದರಿಂದ ಜನರು ಈ ಭಾಗದಲ್ಲಿ ನಡೆದಾಡಲು ಅಸಹ್ಯ ಪಡುವಂತಾಗಿತ್ತು. ಅಲ್ಲದೆ ಇಲ್ಲಿನ ವ್ಯಾಪರಿಗಳಿಗೆ ಇದೊಂದು ನಿತ್ಯದ ಹಿಂಸೆಯಾಗಿತ್ತು. ಈ ಬಗ್ಗೆ ಈ ಹಿಂದಿನಿಂದಲೂ ಪುರಸಭೆಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಸ್ಥಳೀಯ ವ್ಯಾಪಾರಿಗಳು ಪ್ರಸ್ತುತ ಕರ್ತವ್ಯದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಲ್ಲಿ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಅವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಚರಂಡಿ ಸ್ವಚ್ಛ ಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ದುರ್ವಾಸನೆಯಿಂದ ರೋಸಿ ಹೋಗಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಪುರಸಭೆಯ ತಕ್ಷಣದ ಸ್ಪಂದನೆ ನೆಮ್ಮದಿ ನೀಡಿದೆ.
ಚರಂಡಿ ಸ್ವಚ್ಛತೆ: ಸಾರ್ವಜನಿಕರಿಗೆ ದುರ್ವಾಸನೆಯಿಂದ ಮುಕ್ತಿ
