ಬಂಟ್ವಾಳ: ಲಯನ್ಸ್ ಕ್ಲಬ್ ಇದರ ಆಶ್ರಯದಲ್ಲಿ ಲಯನ್ಸ್ ಜನಪದ ಸಂಭ್ರಮ ಮಾ.೧ ರಂದು ಆದಿತ್ಯವಾರ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಕ್ಕೆ ಲಯನ್ಸ್ ಜಿಲ್ಲಾ ರಾಜ್ಯಪಾಲ ರೋನಾಲ್ಡ್ ಗೋಮ್ಸ್ ಜನಪದ ಸಂಭ್ರಮವನ್ನು ಉದ್ಘಾಟಿಸುವರು. ಪ್ರಧಾನ ಸಂಯೋಜಕ ದಾಮೋದರ ಬಿ.ಎಂ. ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಡಾ. ಗೀತಪ್ರಕಾಶ್ ಹಾಗೂ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಭಾಗವಹಿಸುವರು. ಈ ಸಂದರ್ಭ ಜನಪದ ವಿದ್ವಾಂಸ ಪ್ರೊ. ತುಕಾರಮ ಪೂಜಾರಿಯವರಿಗೆ ಜನಪದ ಚಕ್ರವರ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಲಯನ್ಸ್ನ ಜಿಲ್ಲಾ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಸಂಪುಟ ಖಜಾಂಚಿ ಹರೀಶ್ಕೆ. ಶೆಟ್ಟಿ, ಸಂಪುಟ ಸಂಯೋಜಕ ತಾರಾನಾಥ ಶೆಟ್ಟಿ ಬೋಳಾರ್, ಜಿಲ್ಲಾ ಗವರ್ನರ್ ಅವರ ಸಂಯೋಜಕಿ ವಾಣಿ ವಿ.ಆಳ್ವ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಎ. ಸುರೇಶ್ ರೈ, ಲಿಯೋ ಜಿಲ್ಲಾಧ್ಯಕ್ಷ ಶೀಬಾ ಲೋಕೇಶ್ ಹಾಗೂ ಜಿಲ್ಲಾ ಕಾರ್ಯಕ್ರಮಗಳ ಮುಖ್ಯ ಸಂಯೋಜಕ ಸಂಜೀತ್ ಶೆಟ್ಟಿ ಉಪಸ್ಥಿತರಿರುವರು.
ಮಾ.1: ಬಿ.ಸಿ.ರೋಡಿನಲ್ಲಿ ಲಯನ್ಸ್ ಜನಪದ ಸಂಭ್ರಮ
