ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಬಡಾಜೆ ಗುತ್ತಿನ ಮನೆಯಲ್ಲಿ ನಡೆಯಲಿರುವ ನಾಗದರ್ಶನ ಹಾಗೂ ಧರ್ಮನೇಮೋತ್ಸವದ ಪ್ರಯುಕ್ತ ಫೆ. 7ರಂದು ಶುಕ್ರವಾರ ಮಧ್ಯಾಹ್ನ ರಾಜ್ಯ ಉಪಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥ್ ನಾರಾಯಣ ಆಗಮಿಸಲಿದ್ದಾರೆ.
ಫೆ. 8ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಕೃತಿ ಬಿಡುಗಡೆ ಮಾಡಬೇಕಿತ್ತು. ಅವರ ಕಾರ್ಯಕ್ರಮಗಳ ಬದಲಾವಣೆಯಿಂದಾಗಿ ಒಂದು ದಿನ ಮುಂಚಿತವಾಗಿ ಫೆ. 7ರಂದು ಮಧ್ಯಾಹ್ನ 1ಗಂಟೆಯಿಂದ 2 ಗಂಟೆಯ ಒಳಗಾಗಿ ಅವರು ಬಡಾಜೆಗುತ್ತಿಗೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 9.30 ರಿಂದ ಬಡಾಜೆಗುತ್ತಿನ ನಾಗದೇವರ ಸನ್ನಿಧಾನದಲ್ಲಿ ನಾಗದರ್ಶನ ನಡೆಯಲಿದೆ.
ಫೆ.7ಕ್ಕೆ ಬಡಾಜೆಗುತ್ತಿವಿಗೆ ಡಿಸಿಎಂ ಡಾ| ಸಿ.ಎನ್.ಅಶ್ವತ್ಥ್ ನಾರಾಯಣ ಭೇಟಿ
