ಬಂಟ್ವಾಳ: ವೆಸ್ಟರ್ನ್ ಇನ್ಸ್ಟ್ಯೂಟ್ ಆಫ್ ಮಾರ್ಷಲ್ ಆರ್ಟ್ ಇದರ ಆಶ್ರಯದಲ್ಲಿ ಮಿಲಾಗ್ರಿಸ್ನ ಸಿಬಿಎಸ್ ಶಾಲೆಯಲ್ಲಿ ಇತ್ತೀಚೆಗೆ ನಡೆದ 12ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ವೆಸ್ಟ್ರ್ನ್ ಕಪ್ನಲ್ಲಿ ಪುಷ್ಪಕ್ ವಿ.ಜಿ. ವೈಯಕ್ತಿಕ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾನೆ. ಈತ ಬಂಟ್ವಾಳ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು ಪೊಲೀಸ್ ಇಲಾಖೆಯ ವಿಜಯಗೌಡ ಹಾಗೂ ಮಂಜುಳಾ ಅವರ ಸುಪುತ್ರ.
ಕರಾಟೆಯಲ್ಲಿ ಪುಷ್ಪಕ್ಗೆ ಚಿನ್ನದ ಪದಕ
