ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಉ. ಪ್ರಾಥಮಿಕ ಶಾಲೆ ದಡ್ಡಲಕಾಡು ಇದರ ದತ್ತು ಯೋಜನೆಯಡಿ ನೂತನ ಕೊಠಡಿಗಳ ಮತ್ತು ಸಭಾಭವನ ನಿರ್ಮಾಣದ ಸಹಾಯಾರ್ಥ ಹಮ್ಮಿಕೊಂಡ ಲಕ್ಕಿಡಿಪ್ನ ಅದೃಷ್ಟ ವಿಜೇತರ ಆಯ್ಕೆ ಸೋಮವಾರ ದಡ್ಡಲಕಾಡು ಸರಕಾರಿ ಶಾಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಉ. ಪ್ರಾಥಮಿಕ ಶಾಲೆ ದಡ್ಡಲಕಾಡು ಇದರ ದತ್ತು ಯೋಜನೆಯಡಿ ನೂತನ ಕೊಠಡಿಗಳ ಮತ್ತು ಸಭಾಭವನ ನಿರ್ಮಾಣದ ಸಹಾಯಾರ್ಥ ಹಮ್ಮಿಕೊಂಡ ಲಕ್ಕಿಡಿಪ್ನ ಅದೃಷ್ಟ ವಿಜೇತರ ಆಯ್ಕೆ ಸೋಮವಾರ ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ನಡೆಯಿತು.
ಶಾಲಾ ವಿದ್ಯಾರ್ಥಿಗಳು ಅದೃಷ್ಟ ವಿಜೇತರನ್ನು ಆಯ್ಕೆ ಗೊಳಿಸಿದರು. ಈ ಸಂದರ್ಭ ಮುಖ್ಯ ಅತಿಥಿಯಾಗಿದ್ದ ದ್ದ ಇಸ್ರೇಲ್ನಲ್ಲಿ ಉದ್ಯೋಗಿಯಾಗಿರುವ ಕೂಕ್ರಬೆಟ್ಟುವಿನ ಶಿಕ್ಷಣ ಪ್ರೇಮಿ ಸತೀಶ್ಪೂಜಾರಿ ಸನ್ಮಾನಿಸಲಾಯಿತು. ಅವರು ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಟ್ರಸ್ಟಿಗಳಾದ ಪುರುಷೋತ್ತಮ ಅಂಚನ್, ಶೇಖರ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಉಪಾಧ್ಯಕ್ಷ ಉಮೇಶ್ ಪಂಜಿಕಲ್ಲು ಗ್ರಾ.ಪಂ.ಸದಸ್ಯ ಪೂವಪ್ಪ ಮೆಂಡನ್, ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಜಿ., ಆನಂದ ಕೋಟ್ಯಾನ್, ದಿಲೀಪ್ ಡೆಚ್ಚಾರ್, ನವೀನ್ ಸೇಸಗುರಿ, ದೀಪಕ್ ಸಾಲ್ಯಾನ್, ಅಶ್ವತ್ ಕರೆಂಕಿ, ಉದಯ, ಸುರೇಶ್ ಡೆಚ್ಚಾರ್, ಮಹೇಶ್, ಸುಂದರ್, ಕೃಷ್ಣ ಚೆಂಡ್ತಿಮಾರ್, ಚಿದಾನಂದ ಮಣಿಹಳ್ಳ, ಪ್ರವೀಣ್ ನಾಯ್ಕ್, ಮಂಜಪ್ಪ ಅರಳ, ಪ್ರಶಾಂತ್ ಕರೆಂಕಿ, ಧನುಷ್, ಯಶೋಧರ ಕೇಲ್ದೋಡಿ, ರಾಜೇಶ್ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.