ಬಂಟ್ವಾಳ: ಮೂಡಬಿದಿರೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಮತ್ತು ಕುಮಿಟೆ ಸ್ಪರ್ಧೆಯಲ್ಲಿ ಅಮ್ಟೂರಿನ ನವನೀತ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಅವರು ಅಮ್ಟೂರು ದೇವಮಾತ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದರೆ. ವಿಶೇಷವಾಗಿ ಜುಡೋ ಮಾರ್ಷಲ್ ಆರ್ಟ್ನಲ್ಲಿ ಆರೆಂಜ್ ಬೆಲ್ಟ್ನ್ನು ಪಡೆದುಕೊಂಡಿದ್ದಾರೆ. ಇಲ್ಲಿನ ನಿವಾಸಿ ವಿದ್ಯಾ ಹಾಗೂ ಜಯಂತ್ ದಂಪತಿಯ ಪುತ್ರರಾಗಿರುವ ಇವರು ಪೊಳಲಿಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ನಲ್ಲಿ ವೆನಿಲ್ಲಾ ಮಣಿಕಂಠ ಇವರ ಶಿಷ್ಯರಾಗಿ ತರಬೇತಿ ಪಡೆಯುತ್ತಿದ್ದಾರೆ.
ರಾಷ್ಟ್ರಮಟ್ಟದ ಕರಾಟೆಯಲ್ಲಿ ನವನೀತ್ಗೆ ಚಿನ್ನದ ಪದಕ
