ಬಂಟ್ವಾಳ: ಮುಂದಿನ ಫೆ. 6ರಿಂದ 10ರ ವರೆಗೆ ತಾಲೂಕಿನ ಅಮ್ಟಾಡಿ ಗ್ರಾಮದ ಬಡಾಜೆ ಗುತ್ತಿನಲ್ಲಿ ನಾಗದರ್ಶನ ಮತ್ತು ಧರ್ಮನೇಮೋತ್ಸವ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಧರ್ಮಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರವಿಶಂಕರ ಶೆಟ್ಟಿ ಬಡಾಜೆ, ನರಸಿಂಹ ಹೊಳ್ಳ ಎಳೇದಾರ ಬಾವ, ಉಮೇಶ ಶೆಟ್ಟಿ ಕಯ್ಯೂಲಿಮಾರ್ ಗುತ್ತು, ಬಸಂತ ಕುಮಾರ್ ಕಾಯರ್ಮಾರ್, ಪ್ರಶಾಂತ ಬಡಾಜೆ, ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು.
ಬಡಾಜೆಗುತ್ತು ನಾಗದರ್ಶನ ಹಾಗೂ ಧರ್ಮನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
