ಬಂಟ್ವಾಳ: ರೋಟರಿ ಜಿಲ್ಲೆ 3181ರ ವಾರ್ಷಿಕ ಇಂಟರಾಕ್ಟ್ ಸಮ್ಮೇಳನ ರೋಟರಿ ಕ್ಲಬ್ ಸುಳ್ಯ ಹಾಗೂ ಸುಳ್ಯ ಸಿಟಿಯ ಆತಿಥ್ಯದಲ್ಲಿ ಇತ್ತೀಚೆಗೆ ಸುಳ್ಯದ ರೋಟರಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದಿದ್ದು ರೋಟರಿ ಕ್ಲಬ್ ಬಂಟ್ವಾಳ ಪ್ರಾಯೋಜಕತ್ವದ ಸರ್ಕಾರಿ ಪ್ರೌಢಶಾಲೆ ಕಡೆಶಿವಾಲಯದ ಇಂಟರಾಕ್ಟ್ ಕ್ಲಬ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆಯಿತು. ಸರ್ಕಾರಿ ಪ್ರೌಢಶಾಲೆ ಸಿದ್ದಕಟ್ಟೆಯ ಇಂಟರಾಕ್ಟ್ ಕ್ಲಬ್ ರೋಟರಿ ಜಿಲ್ಲೆಯ ಅತ್ಯುತ್ತಮ ಇಂಟರಾಕ್ಟ್ ಪ್ರಶಸ್ತಿಯನ್ನು ಸತತ ಎರಡನೇ ವರ್ಷ ಮುಡಿಗೇರಿಸಿಕೊಂಡಿತು. ಸರ್ಕಾರಿ ಪ್ರೌಢಶಾಲೆ ಪೊಳಲಿಯ ಇಂಟರಾಕ್ಟ್ ಕ್ಲಬ್ ದ್ವಿತೀಯ ಅತ್ಯುತ್ತಮ ಕ್ಲಬ್ ಪ್ರಶಸ್ತಿಗೆ ಭಾಜನವಾದರೆ, ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಪೆರ್ನೆ ಇಂಟರ್ನ್ಯಾಷನಲ್ ಸರ್ವಿಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್, ಜಿಲ್ಲಾ ಇಂಟರಾಕ್ಟ್ ಚೆಯರ್ಮೆನ್ ಡಾ. ಸೂರ್ಯನಾರಾಯಣ, ವಲಯ ೫ರ ಅಸಿಸ್ಟೆಂಟ್ ಗವರ್ನರ್ ಡಾ. ಕೇಶವ ಪಿ.ಕೆ. ಪ್ರಶಸ್ತಿಗಳನ್ನು ವಿತರಿಸಿದರು. ರೋಟರಿ ವಲಯ 4 ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷೆ ಶಿವಾನಿ ಬಾಳಿಗ, ಕಾರ್ಯದರ್ಶಿ ಸ್ಮಿತಾ ಸಲ್ದಾನ, ಯುವಜನ ಸೇವಾ ನಿರ್ದೇಶಕ ಮಹಮ್ಮದ್ ವಳವೂರು ಉಪಸ್ಥಿತರಿದ್ದರು.
ಬಂಟ್ವಾಳ ರೋಟರಿ ಕ್ಲಬ್ ಪ್ರಾಯೋಜಕತ್ವದ ಇಂಟರಾಕ್ಟ್ ಕ್ಲಬ್ಗಳಿಗೆ ಬಹುಮಾನ
