ಬಂಟ್ವಾಳ: ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳ ಇಲ್ಲಿ ಶಾಲಾ ಸಂಭ್ರಮ ಡಿ.೨೦ ರಂದು ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ ನಡೆಯಲಿದ್ದು ಖಂಡಿಗಾ ಕಾಳೀಘಾಟ್ನ ಶ್ರೀ ಕಾಳೀಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಕೊಳ್ನಾಡು ಗ್ರಾ.ಪಂ.ಸದಸ್ಯ ಸಿ.ಎಚ್.ಅಬೂಬಕ್ಕರ್, ನಿವೃತ್ತ ಸೈನಿಕ ಎಂ. ಗೋಪಾಲಕೃಷ್ಣ ಭಟ್, ಉದ್ಯಮಿ ಸದಾಶಿವ ಶೆಟ್ಟಿ, ಪೊಲೀಸ್ ಅಧಿಕಾರಿ ದೇವದಾಸ ಗೌಡ, ಕ್ಷೇತ್ರ ಸಮನ್ವಯಾಧಿಕಾರಿ ರಾಧಕೃಷ್ಣ ಭಟ್, ಸಿಆರ್ಪಿ ಇಂದಿರಾ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ನಡೆಯಲಿದ್ದು ಶಾಸಕ ರಾಜೇಶ್ ನಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ.ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಏ ಮೇರಾ ಇಂಡಿಯಾ , ಜಾದು ಹಾಡು ಮಿಮಿಕ್ರಿ ನೃತ್ಯ ಸಂಭ್ರಮ ನಡೆಯಲಿದೆ.