ಬಂಟ್ವಾಳ: ರೋಟರಿ ಜಿಲ್ಲೆ 3181ರ ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್ ಇತ್ತೀಚೆಗೆ ಸೈಂಟ್ ಫಿಲೋಮಿನ ಕಾಲೇಜಿನ ಮೈದಾನದಲ್ಲಿ ನಡೆದಿದ್ದು ಬಂಟ್ವಾಳ ರೋಟರಿ ಕ್ಲಬ್ 28 ಬಹುಮಾನಗಳನ್ನು ಗೆದ್ದುಕೊಂಡಿದೆ.
ಈ ಪೈಕಿ 13 ಪ್ರಥಮ, 12 ದ್ವಿತೀಯ ಹಾಗೂ 3 ತೃತೀಯ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಂಟ್ವಾಳ ರೋಟರಿಯ ಆನ್ಸ್ ಕ್ಲಬ್ನ ತ್ರೋಬಾಲ್ ತಂಡ ಸತತ 11 ನೇ ಬಾರಿಗೆ ಪ್ರಥಮ ಸ್ಥಾನವನ್ನು ಗೆದ್ದಿದೆ. ಪೂರ್ವ ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ವಿಜೇತರಿಗೆ ಬಹುಮಾನ ವಿತರಿಸಿದರು.
ರೋಟರಿ ಕ್ರೀಡಾಕೂಟದಲ್ಲಿ 28 ಬಹುಮಾನ ಗೆದ್ದ ಬಂಟ್ವಾಳ ರೋಟರಿ ಕ್ಲಬ್
