ಬಂಟ್ವಾಳ: ಇಲ್ಲಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿದೇರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋಹನ್ ಕುಮಾರ್ ಅವರಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇಲ್ಲಿ ಬೀಳ್ಕೋಡುಗೆ ಸಮಾರಂಭ ನಡೆಯಿತು.
ಸಮಾಜಕಲ್ಯಾಣ ಇಲಾಖೆಯ ಎಸ್ಸಿ ಎಸ್ಟಿ /ಟಿಎಸ್ಪಿ ಕೋಶ ಬೆಂಗಳೂರಿನ ನಿರ್ದೇಶಕಿ ಊರ್ಮಿಳಾ ಸನ್ಮಾನಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗಿಶ್ ಎಸ್.ಬಿ. ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕರು, ಕಚೇರಿ ಅಧೀಕ್ಷಕರು, ಸಿಬ್ಬಂದಿಗಳು, ನಿಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ
