ಬಂಟ್ವಾಳ: ಫರಂಗಿಪೇಟೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಆಂಜನೇಯ ದೇವಸ್ಥಾನದ ಕಾಷ್ಠ ಶಿಲ್ಪ ಮುಹೂರ್ತ ಭಾನುವಾರ ವಳವೂರಿನಲ್ಲಿ ನಡೆಯಿತು. ತುಂಬೆ ವಳವೂರಿನ ಬಡಿಲಗುತ್ತು ರವಿಶಂಕರ ಆಳ್ವರ ತೋಟದಲ್ಲಿನ ಕಿರಾಲ್ ಬೋವು ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮುಹೂರ್ತ ನೆರವೇರಿಸಲಾಯಿತು. ಕಲ್ಲತಡಮೆ ಮುರಳಿಭಟ್ ರವರ ನೇತೃತ್ವ ದಲ್ಲಿ ಪೂಜಾವಿಧಿ ಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವಸ್ಥಾನ ಫರಂಗಿಪೇಟೆ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು, ಅಧ್ಯಕ್ಷರಾದ ಅಜಿತ್ ಚೌಟ ದೇವಸ್ಯ, ಕಾರ್ಯಾಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಪ್ರಧಾನ ಸಂಚಾಲಕ ವಿಠ್ಠಲ್ ಆಳ್ವ ಗರೋಡಿ, ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು, ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಕಂಬಳಿ, ಸದಾನಂದ ಆಳ್ವ ಕಂಪ, ವಿಶ್ವನಾಥ ಶೆಟ್ಟಿ ಕೊಟ್ಟಿಂಜ, ಬಾಲಕೃಷ್ಣ ರೈ ದೇವಸ್ಯ, ಪ್ರಭಾಕರ ಆಚಾರ್ಯ, ದಾಮೋದರ ಶೆಣೈ, ತಾರಾನಾಥ ಕೊಟ್ಟಾರಿ ತೇವು, ಗೌರವ ಸಲಹೆಗಾರರಾದ ಪ್ರಕಾಶ್ಚಂದ್ರ ರೈ ದೇವಸ್ಯ, ರಾಮದಾಸ್ ಕೋಟ್ಯಾನ್ ಮಜಿ, ಸುಂದರ ಶೆಟ್ಟಿ ಕಲ್ಲತಡಮೆ, ಶಶಿರಾಜ್ ಶೆಟ್ಟಿ ಕೊಳಂಬೆ, ಜಯಂತ ಶೆಟ್ಟಿ ಪದೆಂಜಾರ್, ಕ್ಷೇತ್ರದ ಕಾರ್ಯದರ್ಶಿಗಳಾದ ಕರುಣಾಕರ ಕೊಟ್ಟಾರಿ, ಸಂತೋಷ್ ಗಾಂಭೀರ, ಸುಕೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಿಲ್ಪಿಗಳಾದ ರಾಮಚಂದ್ರ ಆಚಾರ್ಯ ಬೋಳಂತೂರು ಮತ್ತು ತಂಡ ಪೂಜಾವಿಧಿ ಯಲ್ಲಿ ಪಾಲ್ಗೊಂಡಿತ್ತು ಈ ಸಂದರ್ಭದಲ್ಲಿ ಮರವನ್ನು ದಾನವಾಗಿ ನೀಡಿದ ಬಡಿಲಗುತ್ತು ರವಿ ಶಂಕರ ಆಳ್ವ ದಂಪತಿ ಗಳನ್ನು ಗೌರವಿಸಲಾಯಿತು. ಒಂದು ಮರಕಡಿದ ಜಾಗದ ಪರಿಸರದಲ್ಲಿ 15 ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.