ಬಂಟ್ವಾಳ: ಮಂಗಳೂರಿನ ಮಿಲಾಗ್ರಿಸ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ವಿಧ್ಯಾರ್ಥಿಗಳಾದ ಪ್ರಚನ್ ಪೂಜಾರಿ, ಮಂಥನ್ ಪೂಜಾರಿ, ಹಾಗೂ ಜನ್ವಿತ್ ಮೂರು ವಿಧ್ಯಾರ್ಥಿಗಳು ಕಟಾ,ಕುಮಿತೆ ವಿಭಾಗದಲ್ಲಿ ಒಟ್ಟು 6 ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಪ್ರಶಸ್ತಿ ವಿತರಿಸಿದರು. ಕರಾಟೆ ಶಿಕ್ಷಕ ಅಶೋಕ ಆಚಾರ್ಯ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಚಿನ್ನದ ಪದಕ
