ಬಂಟ್ವಾಳ: ಪಂಚಮುಖಿ ಕಂಬೈನ್ಸ್ ಇದರ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ನಮಸ್ತೆ ಮಾಸ್ಟ್ರೆ ನಾಟಕ ಸಂದರ್ಭದಲ್ಲಿ ಸಾಮಾಜಿಕ ಸೇವಾ ಕಾರ್ಯದ ಅಂಗವಾಗಿ ಬಿ.ಸಿ.ರೋಡಿನ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ, ಕಬ್ಬಡ್ಡಿ ಆಟಗಾರ್ತಿ ಶ್ರಾವ್ಯ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಬಾಲಕ ಮಿತೇಶ್ ಕೆದಿಲ ಅವರಿಗೆ ಆರೋಗ್ಯ ನಿಧಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್ ಮಾತನಾಡಿ ಸ್ವತಃ ಕಲಾವಿದರಾಗಿದ್ದುಕೊಂಡು ಕಲಾಮಾತೆಯ ಸೇವೆ ಮಾಡುವುದರ ಜೊತೆಗೆ ತಮ್ಮ ಊರಿನ ಜನರಿಗೆ ಪ್ರತಿವರ್ಷ ನಾಟಕವನ್ನು ಆಯೋಜಿಸುವ ಮೂಲಕ ಪಂಚಮುಖಿ ಕಂಬೈನ್ಸ್ನ ಸಹೋದರರು ಮನೋರಂಜನೆಯನ್ನು ನೀಡುತ್ತಿದ್ದಾರೆ ಅದರ ಜೊತೆಗೆ ಸಾಧಕರಿಗೆ ಸನ್ಮಾನ, ನೊಂದವರ ಬಾಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.
ವೇದಿಕೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಉದ್ಯಮಿಗಳಾದ ವರದರಾಜ್ ಪೈ, ಸಂಧ್ಯಾ ಪೈ, ಹರೀಂದ್ರ ಪೈ, ಭುವನೇಶ್ ಪಚ್ಚಿನಡ್ಕ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಆದಂ ಸಲಾಂ, ಡಾ. ಗೋವರ್ದನ್, ವಿಜಯ್ ಗುರೂಜಿ ಉಪಸ್ಥಿತರಿದ್ದರು. ಪಂಚಮುಖಿ ಕಂಬೈನ್ಸ್ನ ತಿಮ್ಮಪ್ಪ ಕುಲಾಲ್ ಹಾಗೂ ಸುರೇಶ್ ಕುಲಾಲ್ ವೇದಿಕೆಯಲ್ಲಿದ್ದರು. ರಂಗಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಲೇ ಚಾಪರ್ಕ ಕಲಾ ತಂಡದಿಂದ ನಮಸ್ತೆ ಮಾಸ್ಟ್ರೇ ಹಾಸ್ಯಮಯ ನಾಟಕ ನಡೆಯಿತು.