ಮಂಗಳೂರು: 90 ವರ್ಷಗಳಷ್ಟು ಹಿರಿಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖ್ಯಾತಿಯ ಭಾರತೀಯ ವೈದ್ಯಕೀಯ ಸಂಘ ಮಂಗಳೂರು(ಸ್ಥಾಪನೆ 1930 ಅವಿಭಜಿತ ದಕ ಜಿಲ್ಲೆ ವ್ಯಾಪ್ತಿ) ಇದರ ಅಧ್ಯಕ್ಷರಾಗಿ ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆ, ಶ್ರೀನಿವಾಸ್ ವಿಶ್ವ ವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ, ಪ್ರಾಧ್ಯಾಪಕ, ನಗರದ ಹಿರಿಯ ಖ್ಯಾತ ಕುಟುಂಬ ವೈದ್ಯರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆಯಾಗಿದ್ದಾರೆ.
ಪದಗ್ರಹಣ ಸಮಾರಂಭ ಅಕ್ಟೋಬರ್ 31 ರಂದು ಜರುಗಲಿದ್ದು. ರಾಜ್ಯ ಐಎಂಎ ಅಧ್ಯಕ್ಷ ಡಾ ಮಧುಸೂದನ್ , ರಾಜ್ಯದ ಉಪಮುಖ್ಯ ಮಂತ್ರಿ, ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ. ಮಂಗಳೂರು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ನಳಿನ್ಕುಮಾರ್ ಕಟೀಲ್ ಜೊತೆ ಅವಿಭಜಿತ ದಕ ಜಿಲ್ಲೆಯ ಎಲ್ಲಾ ಎಂಟು ವೈದ್ಯಕೀಯ ಕಾಲೇಜುಗಳ ಮಾಲಕರು ಭಾಗವಹಿಸಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಡಾ. ಅಣ್ಣಯ್ಯ ಕುಲಾಲ್ ಆಯ್ಕೆ
