ಬಂಟ್ವಾಳ: ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ರಜತ ಸಂಭ್ರಮಾಚರಣೆಗೆ ಅಂಗವಾಗಿ ಪುಸ್ತಕ ಭಿಕ್ಷೆ ಅಭಿಯಾನವನ್ನು ಆರಂಭಿಸಲಾಗಿದೆ. ಪುಸ್ತಕಾಸಕ್ತರು ತಮ್ಮಲ್ಲಿ ಹೆಚ್ಚುವರಿಯಾಗಿರುವ ಹಳೆಯ ಅಥವಾ ಹೊಸ ಪುಸ್ತಕಗಳನ್ನು, ಸಂಶೋಧನ ಗ್ರಂಥಗಳನ್ನು, ದಾಖಲಾತಿಗಳನ್ನು, ಕಡತಗಳನ್ನು ಅಥವಾ ಇನ್ನಿತರೆ ಆಕರಗಳನ್ನು, ನಾಡು ನುಡಿಗೆ ಸಂಬಂಧಪಟ್ಟ ಯಾವುದೇ ಭಾಷೆಯ ಪುಸ್ತಕಗಳನ್ನು ಅಧ್ಯಯನ ಕೇಂದ್ರಕ್ಕೆ ನೀಡುವಂತೆ ಕೇಂದ್ರದ ಅಧ್ಯಕ್ಷ ತುಕರಾಂ ಪೂಜಾರಿ ಮನವಿ ಮಾಡಿದ್ದಾರೆ.
ಕೇಂದ್ರವು ಸಾಂಪ್ರದಾಯಿಕ ಇತಿಹಾಸ ಅಧ್ಯಯನದ ಹೊರತಾಗಿ ಭೌತಿಕ ಸಂಸ್ಕೃತಿ ಮತ್ತು ಮೌಖಿಕ ಇತಿಹಾಸ ಅಧ್ಯಯನಕ್ಕೆ ಒತ್ತು ನೀಡಿ ದೇಶಿ ನೆಲೆಯಲ್ಲಿ ಈ ಪ್ರದೇಶದ ಸಾಂಸ್ಕೃತಿಕ ಇತಿಹಾಸದ ರಚನಾ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಪೂರಕವಾಗಿ ಸಾವಿರಾರು ಭೌತಿಕ ವಸ್ತುಗಳ ಸಂಗ್ರಹವೂ ಆಗಿದೆ. ಅಧ್ಯಯನ ಪೂರ್ಣಗೊಳಿಸಲು ತುಳುವರ ಬದುಕಿಗೆ ಸಂಬಂಧಪಟ್ಟ ಅನುಪಯುಕ್ತವಾದ ಯಾವುದೇ ಹಳೆಯ ವಸ್ತುಗಳನ್ನು ಕೇಂದ್ರಕ್ಕೆ ನೀಡಿ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವಂತೆ ಅವರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ
ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ, ಅಂಚೆ ಕಛೇರಿ ರಸ್ತೆ, ಬಿ.ಸಿ ರೋಡು, ಬಂಟ್ವಾಳ, ದ.ಕ, 574219. ದೂರವಾಣಿ ಸಂಖ್ಯೆ 9449165762, 9480486398 ಸಂಪರ್ಕಿಸುವಂತೆ ಕೋರಲಾಗಿದೆ.
ರಾಣಿ ಅಬ್ಬಕ್ಕ ಕೇಂದ್ರದಿಂದ ಪುಸ್ತಕ ಭಿಕ್ಷೆ ಅಭಿಯಾನ
