ಬಂಟ್ವಾಳ: ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ನ ದತ್ತು ಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪ್ರಗತಿಯನ್ನು ವೀಕ್ಷಿಸಲು ಸೋಮವಾರ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡುವ ಹಿನ್ನಲೆಯಲ್ಲಿ ಭಾನುವಾರ ಶಾಲೆಯಲ್ಲಿ ಶ್ರಮದಾನ ಸೇವೆ ನಡೆಯಿತು.
೫೦೦ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳ ಪಾಲಕರು ಶ್ರಮದಾನದಲ್ಲಿ ಭಾಗವಹಿಸಿ ಶಾಲೆಯ ಮೈದಾನ ಸ್ಚಚ್ಛತೆ, ನೂತನ ಕಟ್ಟಡಕ್ಕೆ ಕಲ್ಲು, ಮರಳು ಸಾಗಾಟ, ಕಳೆ ಗಿಡಗಳನ್ನು ತೆರವು ಗೊಳಿಸುವ ಕಾರ್ಯ ನಡೆಸಿದರು. ಬಳಿಕ ಪೋಷಕರ ಸಭೆ ನಡೆಯಿತು.
ಶಿಕ್ಷಣಾಧಿಕಾರಿ ಭೇಟಿ:
ಶಿಕ್ಷಣ ಸಚಿವರ ಭೇಟಿಯ ಹಿನ್ನಲೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಯಂ.ಪಿ. ಭಾನುವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಟ್ರಸ್ಟಿ ಪುರುಷೋತ್ತಮ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಪ್ರಮುಖರಾದ ಬಾಲಕೃಷ್ಣ, ನವೀನ್ ಸೇಸಗುರಿ, ದಿಲೀಪ್ ಡೆಚ್ಚಾರ್ ಮತ್ತಿತರರು ಹಾಜರಿದ್ದರು.