ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ ಮತ್ತು ಪೋಷಣ ಮಾಸಾಚರಣೆಯನ್ನು ಸೆ.12 ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಸಲಾಯಿತು. ತಹಶಿಲ್ದಾರ್ ಗಣಪತಿಶಾಸ್ತ್ರಿ ಮಕ್ಕಳಿಗೆ ಅನ್ನ ಪ್ರಾಶನ ಮಾಡುವ ಮೂಲಕ ಪೋಷಣಾ ಮಾಸಾಚರಣೆಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ, ಶಿಶು ಅಭಿವೃದ್ಧಿ ಅಧಿಕಾರಿ ಪ್ರಿಯ ಅಗ್ನೇಸ್ , ಮೇಲ್ವಿಚಾರಕಿ ರತ್ನಾವತಿ , ಪಿಡಿಒ ನಾಗೇಶ್ ಎಂ, ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಕೇಂದ್ರದ ಲತೇಶ್ ಉಪಸ್ಥಿತರಿದ್ದರು.
ಮಡಂತ್ಯಾರ್ ಗ್ರಾ.ಪಂ.ನಲ್ಲಿ ಪೋಷಣ ಮಾಸಚರಣೆ
