ಬಂಟ್ವಾಳ: ಸಾಧನೆಗೆ ಪ್ರಯತ್ನ ಪಡಬೇಕು ಯಾವುದೇ ಯಶಸ್ಸುಗಳುವಸುಲಭದಲ್ಲಿ ಸಿಗುವುದಿಲ್ಲ ಎಂದು ಚಾರ್ಟೆಡ್ ಅಕೌಂಟೆಂಟ್ ಅನಂತಕೃಷ್ಣ ಪಡ್ವೆಟ್ನಾಯ.ಯು ಹೇಳಿದರು. ಅವರು ಬಂಟ್ವಾಳ ದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪದವಿ ಪೂರ್ವ ವಿಭಾಗದಲ್ಲಿ ಸಿಎ ಫೌಂಡೇಶನ್ ಕೊರ್ಸ್ ನ್ನು ಉದ್ಘಾಟಿಸಿ ಮಾತನಾಡಿದರು. ಸ್ವಯಂ ಪ್ರೇರಣೆಯ ಮೂಲಕ ನಮ್ಮ ಪ್ರಯತ್ನ ಆರಂಭಿಸ ಬೇಕು, ಸಿಎ ಆಗಬೇಕು ಎನ್ನುವ ಏಕೈಕ ಗುರಿಯನ್ನು ಹೊಂದಿದ್ದಾಗ ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿದೆ ಎಂದರು.
ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶಶಿಕಲಾ ಕೆ ಉಪಸ್ಥಿತರಿದ್ದರು.
ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಅಖಿಲ ಪೈ ಎಚ್. ಸ್ವಾಗತಿಸಿದರು. ಸಿಎ ಫೌಂಡೇಶನ್ ಕೋರ್ಸ್ ನ ಸಂಯೋಜಕಿ ಸಂಧ್ಯಾ ಶೆಣೈ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕರಾದ ಹರ್ಷಿತಾ ಸಿ.ಟಿ ವಂದಿಸಿದರು.ಕಾವ್ಯಶ್ರಿ ಎಚ್.ಎನ್. ಮತ್ತು ಮಹಿಮಾ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಉದ್ಘಾಟನೆ
