ಬಂಟ್ವಾಳ : ಇಲ್ಲಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ಸಮೀಪ ವಾಸ್ತವ್ಯವಿರುವ ಗೋವಿಂದ ಮೂಲ್ಯ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕೆ ಬೇಕಾದ ಸಿಮೆಂಟನ್ನು ಒದಗಿಸುವುದೆಂದು ಬಂಟ್ವಾಳ ಕುಲಾಲ ವೇದಿಕೆ ನಿರ್ಧರಿಸಿದಂತೆ ಮನೆಯ ಸ್ಲಾಬ್ ಕೆಲಸದವರೆಗೆ ಕಾಮಗಾರಿ ಪೂರ್ಣವಾಗಿದ್ದು ವೇದಿಕೆ ಸದಸ್ಯರು ಅಲ್ಲಿಗೆ ತೆರಳಿ ವೀಕ್ಷಿಸಿ ಈ ತನಕ ಖರ್ಚಾದ 98 ಚೀಲ ಸಿಮೆಂಟ್ ಬಾಬ್ತು ಎರಡನೇ ಕಂತಿನ ಹಣವನ್ನು ಚೆಕ್ ಮೂಲಕ ಗೋವಿಂದ ಮೂಲ್ಯರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗೋವಿಂದರ ಮೂಲ್ಯ ಅವರ ಪತ್ನಿ ಮೀನಾಕ್ಷಿ ಬಂಟ್ವಾಳ ಕುಲಾಲ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಗೌರವಾಧ್ಯಕ್ಷ ನಾರಾಯಣ ಸಿ ಪೆರ್ನೆ, ಜೊತೆ ಕಾರ್ಯದರ್ಶಿ ಹಾಗೂ ಬಂಟ್ವಾಳ ನಗರ ರೋಟರಿ ಅಧ್ಯಕ್ಷ ಜಯರಾಜ್ ಬಂಗೇರ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲ್ ಮತ್ತು ಗೌರವ ಸಲಹೆಗಾರ ಶೇಷಪ್ಪ ಮಾಸ್ಟರ್ ಉಪಸ್ಥಿತರಿದ್ದರು.
ಬಂಟ್ವಾಳ ಕುಲಾಲ ಯುವ ವೇದಿಕೆಯ ವತಿಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ
