ಬಂಟ್ವಾಳ: ಅಲ್ಕಾರ್ಗೊ ಲಾಜಿಸ್ಟಿಕ್ ಲಿ. ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು, ಲಯನ್ಸ್ ಕ್ಲಬ್ ಬಂಟ್ವಾಳ, ಜೆಸಿಐ ಬಂಟ್ವಾಳ, ಶಾಲಾಭಿವೃದ್ದಿ ಸಮಿತಿ ದಡ್ಡಲಕಾಡು ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣ ಶಿಬಿರ ಆ.25ರಂದು ರವಿವಾರ ಬೆಳಿಗ್ಗೆ 9.30 ರಿಂದ 12.30ರವರೆಗೆ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣು, ಕಿವಿ ಮೂಗು ಗಂಟಲು, ಎಲುಬು, ಸ್ತ್ರಿರೋಗ ಹಾಗೂ ಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ. ಮಧುಮೇಹ ತಪಾಸಣೆಯೂ ನಡೆಯಲಿದೆ. ಈ ಎಲ್ಲಾ ತಪಾಸಣೆಗಳು ಉಚಿತವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯು ಶಿಬಿರದಲ್ಲಿ ನೀಡಲಾಗುವ ಹಸಿರು ಕಾರ್ಡನ್ನು ಬಳಸಬಹುದು, ಹಸಿರು ಕಾರ್ಡು ಹೊಂದಿದವರಿಗೆ ಶಸ್ತ್ರ ಚಿಕಿತ್ಸೆಗೆ ಗರಿಷ್ಟ ರೂ. 10 ಸಾವಿರ ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂ. 5 ಸಾವಿರ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಪಡೆಯಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಡ್ಡಲಕಾಡು ಸರಕಾರಿ ಶಾಲೆಯಲ್ಲಿ. ಆ.25 ರಂದು ಉಚಿತ ಆರೋಗ್ಯ ತಪಾಸಣ ಶಿಬಿರ
