ಬಂಟ್ವಾಳ: ಜೇಸಿಐ ಬಂಟ್ವಾಳದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಸರಕಾರಿ ಶಾಲೆಗೆ ಜಾರು ಬಂಡಿ ಹಾಗೂ ಇತರ ಆಟದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜೇಸಿಐ ವಲಯ 15ರ ಉಪಾಧ್ಯಕ್ಷ ದಾಮೋದರ ಪಾಟಾಳಿ ಆಟ ಸಾಮಾಗ್ರಿಗಳನ್ನು ಹಸ್ತಾಂತರಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು, ನನ್ನದು ಎನ್ನುವ ಭಾವನೆಯನ್ನು ಬಿಟ್ಟು ನಾವು, ನಮ್ಮದು ಎನ್ನುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಆಗ ನಾವು ಮಾತ್ರವಲ್ಲ ನಮ್ಮೊಂದಿಗೆ ದೇಶವೂ ಅಭಿವೃದ್ದಿಯಾಗಲು ಸಾಧ್ಯವಿದೆ ಎಂದರು.
ಜೇಸಿಐಯ ಜೈ ಜವಾನ್- ಜೈ ಕಿಸಾನ್ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಸೈನಿಕ ಆನಂದ ಡಿ. ತಾಳಿತ್ತನೂಜಿಕೋಡಿ ಹಾಗೂ ಪ್ರಗತಿಪರ ಕೃಷಿಕ ಹಾಗೂ ಕಂಬಳ ಓಟಗಾರ ಅಣ್ಣು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು. ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಪಡು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿಜಯ ಅಮ್ಟಾಡಿ, ಮುಖ್ಯೋಪಾಧ್ಯಾಯಿನಿ ಜ್ಯೋತಿ ಜೇಸಿಐ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷ ದಯಾನಂದ ರೈ, ಕಾರ್ಯದರ್ಶಿ ಉಮೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿಐ ಬಂಟ್ವಾಳದ ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸುರೇಶ್ಕುಮಾರ್ ನಾವೂರು, ಲೋಕೇಶ್ ಸುವರ್ಣ, ಸಂತೋಷ್ ಜೈನ್, ಡಾ. ಬಾಲಕೃಷ್ಣ ಅಗ್ರಬೈಲು, ಸದಾನಂದ ಬಂಗೇರ, ಗಣೇಶ್ ಕುಲಾಲ್, ರಾಜೇಂದ್ರ ಕುಮಾರ್, ಉಮೇಶ್ ಆರ್. ಮೂಲ್ಯ, ವೆಂಕಟೇಶ್ ಕೃಷ್ಣಾಪುರ, ಶ್ರೀನಿವಾಸ ಅರ್ಬಿಗುಡ್ಡೆ, ಮಾಧವ ವಿ.ಎಸ್., ದೀಪಕ್ ಸಾಲ್ಯಾನ್ ಭಾಗವಹಿಸಿದ್ದರು.