ಬಂಟ್ವಾಳ: ಇಲ್ಲನ ಬ್ರಹ್ಮರಕೂಟ್ಲು ದ. ಕ. ಜಿ. ಪಂ. ಹಿ. ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ವಿಜ್ಞಾನ ರಂಗೋಲಿಗಳ ಪ್ರದರ್ಶನ ಜರುಗಿತು. ಶಿಕ್ಷಣ ಸಂಯೋಜಕಿ ಸುಶೀಲಾ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಭಾರತಿ, ಶಾಲಾ ಎಸ್ಡಿಎಂಸಿಯ ಉಪಾಧ್ಯಕ್ಷ ಕಿಶೋರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜ್ಞಾನ ಮಾದರಿ ಕೊಠಡಿಯಲ್ಲಿ ವಿಜ್ಞಾನಿಗಳ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೋರಿನ್ ರೆಬೆಲ್ಲೋ ಸ್ವಾಗತಿಸಿದರು, ಪ್ಲೇವಿ ಪ್ರೀತಿ ಫರ್ನಾಂಡಿಸ್ ವಂದಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ವಿಜ್ಞಾನ ಮಾದರಿ ಹಾಗೂ ವಿಜ್ಞಾನ ರಂಗೋಲಿಗಳ ಪ್ರದರ್ಶನ
