ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಭಾರತ ಶಿಕ್ಷಣ ಯಾತ್ರೆ ಯ ರಥ ಮಂಗಳವಾರ ಬೆಳಿಗ್ಗೆ ಕೊಲ್ಹಾಪುರದಿಂದ ಮುಂಬೈಯತ್ತ ಪ್ರಯಾಣ ಬೆಳೆಸಿದೆ. ಕೊಲ್ಹಾಪುರದ ವೈಭವ್ ಬಳಿ ಸ್ಥಳೀಯ ಶಿಕ್ಷಣಾಭಿಮಾನಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆದು ರಥವನ್ನು ಬೀಳ್ಕೊಟ್ಟರು. ಬುಧವಾರ ಬೆಳಿಗ್ಗೆ 10 ಗಂಟೆಗೆ ಸಾಂತಕ್ರೂಜ್ ಬಿಲ್ಲವ ಭವನದಲ್ಲಿ ಮುಂಬೈಯ ಎಲ್ಲಾ ಶಿಕ್ಷಣಾಭಿಮಾನಿಗಳು, ಗಣ್ಯರು ಸ್ವಾಗತಿಸಲಿದ್ದಾರೆ.