ಬಂಟ್ವಾಳ: ತಂದೆ ತಾಯಿ ಕಣ್ಣಿಗೆ ಕಾಣುವ ದೇವರು. ಮಕ್ಕಳಲ್ಲಿ ಭಕ್ತಿ, ಶ್ರದ್ದೆ ನಂಬಿಕೆಯನ್ನು ಮೂಡಿಸುವ ಕಾರ್ಯವನ್ನು ತಂದೆ ತಾಯಿಗಳು ಮಾಡಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯ ಪ್ರಯುಕ್ತ ಭಾನುವಾರ ನಡೆದ ಬಾಲ ಭೋಜನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಪುಂಡಲೀಕ ಶೇಟ್, ಸದಾನಂದ ಪುಂಡಲೀಕ್ ಶೇಟ್, ಉದ್ಯಮಿ ದೇವದಾಸ್, ಕ್ಷೇತ್ರದ ಟ್ರಸ್ಟಿ ಮಚ್ಚೇಂದ್ರನಾಥ್ ಸಾಲ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಕಾರ್ಯದರ್ಶಿ ಗೀತಾ ಪರುಷೋತ್ತಮ ವಸಂತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತಂದೆ ತಾಯಿ ಮಕ್ಕಳಲ್ಲಿ ಭಕ್ತಿ, ನಂಬಿಕೆಯನ್ನು ಮೂಡಿಸಬೇಕು: ಮಾಣಿಲ ಶ್ರೀ
