ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ 10 ಇಂಟರಾಕ್ಟ್ ಕ್ಲಬ್ ಹಾಗೂ 1 ರೋಟರಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ಬಿ.ಸಿರೋಡಿನ ರೋಟರಿ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.
ವಲಯ 4ರ ಇಂಟರಾಕ್ಟ್ ಸಂಯೋಜಕ ವಿನ್ಸೆಂಟ್ ಡಿ ಕೋಸ್ಟ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದರು. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಎಸ್ಎಸ್ಎಲ್ಸಿಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಅನುಪಮ ಕಾಮತ್ ಅವರನ್ನು ಅವರನ್ನು ಸನ್ಮಾನಿಸಲಾಯಿತು. ಕ್ಲಬ್ನ ಅಧ್ಯಕ್ಷೆ ಶಿವಾನಿ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ 4 ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ಪ್ರಮುಖರಾದ ರಾಮಣ್ಣ ರೈ, ಪದ್ಮಲತಾ ಹೆಗ್ಡೆ, ವಸಂತ ಪ್ರಭು, ನಾರಾಯಣ ಹೆಗ್ಡೆ, ರವಿರಾಜ ಶೆಟ್ಟಿ, ಪ್ರಭಾಕರ ಪ್ರಭು, ಪುಷ್ಪರಾಜ ಹೆಗ್ಡೆ, ಶಾಂತಿ ಪ್ರಕಾಶ್ ಡಿಸೋಜಾ ಹಾಜರಿದ್ದರು. ಶ್ರೀ ಶಾರಾದ ಪ್ರೌಢಶಾಲೆ ಪಾಣೆಮಂಗಳೂರು, ಎಸ್ಎಲ್ಎನ್ಪಿ ವಿದ್ಯಾಲಯ ಪಾಣೆಮಂಗಳೂರು, ಕೊಯಿಲ ಸರಕಾರಿ ಪ್ರೌಢಶಾಲೆ, ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆ, ಕರ್ನಾಟಕ ಪ್ರೌಢಶಾಲೆ ಮಾಣಿ, ಬೆಂಜನಪದವು ಸರಕಾರಿ ಪ್ರೌಢಶಾಲೆ, ಕಡೆಶಿವಾಲಯ ಸರಕಾರಿ ಪ್ರೌಢಶಾಲೆ, ಪೆರ್ನೆ, ಮಣಿನಾಲ್ಕೂರು ಹಾಗೂ ಪೊಳಲಿ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ ಪದಗ್ರಹಣದಲ್ಲಿ ಪಾಲ್ಗೊಂಡರು.
ಯುವ ಸೇವಾ ನಿರ್ದೇಶಕ ಮಹಮ್ಮದ್ ವಳವೂರು ಪರಿಚಯಿಸಿದರು. ಕಾರ್ಯದರ್ಶಿ ಸ್ಮಿತಾ ಸಲ್ದಾನ ವಂದಿಸಿದರು. ಸಿದ್ದಕಟ್ಟೆ ಶಾಲೆಯ ಇಂಟರಾಕ್ಟ್ ಸಂಯೋಜಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ
