ಬಂಟ್ವಾಳ: 51ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಂಟ್ವಾಳ ರೋಟರಿ ಕ್ಲಬ್ನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 5 ಶುಕ್ರವಾರ ಸಂಜೆ 7 ಗಂಟೆಗೆ ಬಿ.ಸಿ.ರೋಡಿನ ರೈಲು ನಿಲ್ದಾಣದ ಬಳಿಯ ರೋ. ಬಿ.ಎ.ಸೋಮಯಾಜಿ ಮೆಮೋರಿಯಲ್ ಹಾಲ್ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷೆ ಶಿವಾಣಿ ಬಾಳಿಗ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ವಲಯ 3181ರ ಜಿಲ್ಲಾ ಗವರ್ನರ್ ರಂಗನಾಥ ಭಟ್ ಪದಗ್ರಹಣ ಅಧಿಕಾರಿಯಾಗಿ ಹಾಗೂ ಗಣೇಶ್ ಬೀಡಿ ವರ್ಕ್ಸ್ ಮೈಸೂರಿನ ರೊ. ಎಂ. ಜಗನ್ನಾಥ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಲಯ ೪ರ ಸಹಾಯಕ ಗವರ್ನರ್ ರೊ.ಮೇಜರ್ ಡೋನರ್ ರಿತೇಶ್ ಬಾಳಿಗ ಕ್ಲಬ್ ಸಂಚಿಕೆ ರೋಟ್ವಾಲ್ ಬಿಡುಗಡೆಗೊಳಿಸಲಿದ್ದಾರೆ, ವಲಯ ಸೇನಾನಿ ರೊ. ಮಂಜುನಾಥ ಆಚಾರ್ಯ ಉಪಸ್ಥಿತರಿರುವರು ಎಂದರು.
ಈ ವರ್ಷ ಭಾರತೀಯ ರೋಟರಿ ಕ್ಲಬ್ ಶತಮಾನ ವರ್ಷಚರಣೆಯನ್ನು ಮಾಡುತ್ತಿರುವುದು ವಿಶೇಷ. ಈ ಸುಸಂದರ್ಭದಲ್ಲಿ ಈಗಾಗಲೇ ಸುವರ್ಣ ವರ್ಷಾಚರಣೆಯನ್ನು ಮಾಡಿ ಮುಂದುವರಿಯುತ್ತಿರುವ ಬಂಟ್ವಾಳ ರೋಟರಿ ಕ್ಲಬ್ ಮೊದಲ ಮಹಿಳಾ ಅಧ್ಯಕ್ಷೆ ಶಿವಾನಿ ಬಾಳಿಗ ಅವರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದೆ. ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಅವರ ಜಿಲ್ಲಾ ಯೋಜನೆ ಜೀವನ ಸಂಧ್ಯಾ ಎನ್ನುವ ವೃದ್ಧಾಶ್ರಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಸವಲತ್ತುಗಳನ್ನು ಒದಗಿಸುವ ಕಾರ್ಯಕ್ರಮವನ್ನು ವೈಶಿಷ್ಠ್ಯಪೂರ್ಣವಾಗಿ ಮಾಡಲಿದ್ದೇವೆ ಎಂದರು.
೨೦೧೮-೧೯ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾನಿ ಬಾಳಿಗ, ಕಾರ್ಯದರ್ಶಿಯಾಗಿ ಸ್ಮಿತಾ ಸಲ್ದಾನ, ಕೋಶಾಧಿಕಾರಿಯಾಗಿ ರವಿರಾಜ್ ಶೆಟ್ಟಿ, ಸಾರ್ಜೆಂಟ್ ಆಗಿ ಪ್ರಭಾಕರ ಪ್ರಭು, ಕ್ಲಬ್ ಸೇವೆ ನಿರ್ದೆಶಕರಾಗಿ ಕೆ. ನಾರಾಯಣ ಹೆಗ್ಡೆ, ವೋಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶಾಂತಿ ಪ್ರಕಾಶ್ ಡಿಸೋಜಾ, ಸಮುದಾಯ ಸೇವೆ ನಿರ್ದೇಶಕರಾಗಿ ಕರುಣಾಕರ ರೈ, ಅಂತರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ವಿದ್ಯಾ ಎ. ರೈ, ಯುಜನ ಸೇವೆ ನಿರ್ದೇಶಕರಾಗಿ ಮಹಮ್ಮದ್ ವಳವೂರು, ಉಪಾಧ್ಯಕ್ಷರಾಗಿ ವಾಣಿ ಕಾರಂತ್, ಜೊತೆ ಕಾರ್ಯದರ್ಶಿಯಾಗಿ ಅಹಮ್ಮದ್ ಮುಸ್ತಾಫ, ನಿಯೋಜಿತ ಅಧ್ಯಕ್ಷರಾಗಿ ಮಂಜುನಾಥ ಆಚಾರ್ಯ, ಫೌಂಡೇಶನ್ ಚೇಯರ್ಮನ್ ಆಗಿ ಡಾ. ರಮೇಶಾನಂದ ಸೋಮಯಾಜಿ, ಲಿಟರೆಸಿ ಚೆಯರ್ಮನ್ ಆಗಿ ಐತ್ತಪ್ಪ ಆಳ್ವ, ವಿನ್ಸ್ ಚೆಯರ್ಮನ್ ಆಗಿ ಪ್ರತಿಭಾ ಎ ರೈ, ಪಲ್ಸ್ ಪೊಲಿಯೋ ಚೇಯರ್ಮನ್ ಆಗಿ ಡಾ.ಅಶ್ವಿನ್ ನಾಯಕ್ ಸುಜೀರ್, ಮೆಂಬರ್ಶಿಪ್ ಡೆವಲಪ್ಮೆಂಟ್ ಚೆಯರ್ಮನ್ ಆಗಿ ಮಹಮ್ಮದ್ ಇಕ್ಬಾಲ್, ವೆಬ್ ಚೆಯರ್ಮನ್ ಆಗಿ ರಾಮಚಂದ್ರ ನಾಯಕ್ ಆಯ್ಕೆಯಾಗಿದ್ದಾರೆ ಎಂದರು. ಅಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ ಸುವರ್ಣ ವರ್ಷಚರಣೆಯ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವಂತಹ ಸಂಚಾರಿ ತಾರಾಲಯ, ಸೈನ್ಸ್ ಆನ್ ವೀಲ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನೇತ್ರ ದಾನದ ಮಹತ್ವ ಸಾರುವ ಕಿರುಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ. ರೋಟರಿ ಕ್ಲಬ್ ಪ್ರಾಯೋಜಕತ್ವದ ಭದ್ರ ಚಾಲೆಂಜರ್ಸ್ ಕಬಡ್ಡಿ ತಂಡ ಹಲವಾರು ಬಹಮಾನಗಳನ್ನು ಗೆದ್ದಿದೆ. ಇದೆಲ್ಲದರ ಪರಿಣಾಮವಾಗಿ ಬಂಟ್ವಾಳ ರೋಟರಿ ಕ್ಲಬ್ 22 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ನಿಯೋಜಿತ ಕಾರ್ಯದರ್ಶಿ ಸ್ಮಿತಾ ಸಲ್ದಾನ, ವಲಯ ೪ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ಪ್ರಮುಖರಾದ ಕೆ.ಎನ್.ಹೆಗ್ಡೆ, ಡಾ. ಪ್ರತಿಭಾ ಆತ್ಮರಂಜನ್ ರೈ, ವಿದ್ಯಾ ಎ.ರೈ ಉಪಸ್ಥಿತರಿದ್ದರು.