ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಸಮಿತಿಯಿಂದ ಹರಿಯಾಣದಲ್ಲಿ ಆಚಾರ್ಯ ಪ್ರದ್ಯುಮ್ ಭೇಟಿ
ಬಂಟ್ವಾಳ: ಪತಂಜಲಿ ಯೋಗಗುರು ಬಾಬಾರಾಮ್ ದೇವ್ ಅವರ ಗುರುಗಳಾದ ಆಚಾರ್ಯ ಪ್ರದ್ಯುಮ್ ಅವರನ್ನು ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಸಮಿತಿ ತಂಡ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಹರಿಯಾಣ ರಾಜ್ಯದ ಖಾನ್ಪುರದ ಆರ್ಶ್ ಗುರುಕುಲದಲ್ಲಿ ಭೇಟಿಯಾದರು. ದೇಶದಲ್ಲಿ ಸಮಾನ ಶಿಕ್ಷಣ ಜಾರಿಗೊಳಿಸುವ ಬಗ್ಗೆ ಗುರುಗಳೊಂದಿಗೆ ಚರ್ಚೆ ನಡೆಸಲಾಯಿತು. ಈ ಹಿಂದಿನಿಂದಲೇ ಈ ಬಗ್ಗೆ ಕಾರ್ಯಕ್ರಮ ನಡೆಸುತ್ತಿದ್ದು ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಅತ್ಯಗತ್ಯವಾಗಿ ಬೇಕಾಗಿದ್ದು ತನ್ನ ಬೆಂಬಲವಿದೆ ಎಂದು ತಿಳಿಸಿದರು. ಈ ಸಂದರ್ಭ ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಸಮಿತಿಯ ಪ್ರಮುಖರಾದ ರಾಜೀವ್ ಕೇರಾ, ಶರವಣ್ ಚಾವ್ಲಾ, ಅಮಿತ್ ಕುಮಾರ್ ಆರ್ಯ ಮೊದಲಾವರು ಹಾಜರಿದ್ದರು.
ಒಂದೇ ದೇಶ ಒಂದೇ ಶಿಕ್ಷಣ ಆಂದೋಲನ ಸಮಿತಿಯಿಂದ ಹರಿಯಾಣದಲ್ಲಿ ಆಚಾರ್ಯ ಪ್ರದ್ಯುಮ್ ಭೇಟಿ
