ಬಂಟ್ವಾಳ: ಇಲ್ಲಿನ ಬೈಪಾಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ಕೇರಾ ಇಂಜಿನಿಯರಿಂಗ್ ವರ್ಕ್ಸ್ನ ನೂತನ ಸಂಸ್ಥೆ ಕರ್ಕೇರಾ ಕಿಚನ್ ಎಪ್ಲೈಯನ್ಸಸ್ನ ಶುಭಾರಂಭ ಗುರುವಾರ ಬೆಳಿಗ್ಗೆ ನಡೆಯಿತು. ಸಂಸ್ಥೆಯ ಆಡಳಿತ ನಿರ್ದೇಶಕ ಯತೀಶ್ ಕರ್ಕೇರಾ ಅವರ ತಾಯಿ ವಿಮಲಾ ವಿ.ಕರ್ಕೆರಾ ದೀಪಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಯತೀಶ್ ಕರ್ಕೇರಾ ಅವರ ಸಹೋದರರರಾದ ಪ್ರೇಮನಾಥ್ ಕೆ., ಸುಧಾಕರ್, ಸುಕುಮಾರ್, ಪ್ರಮುಖರಾದ ಕೊರಗಪ್ಪ ಕದ್ರಿ, ದಿನೇಶ್ ಪೈ, ಶಿವಪ್ರಸಾದ್ ಜೇಸಿಐ ಬಂಟ್ವಾಳದ ಸದಸ್ಯರಾದ ಲೋಕೇಶ್ ಸುವರ್ಣ, ನಾಗೇಶ್ ಬಾಳೆಹಿತ್ಲು, ಉಮೇಶ್ ಆರ್.ಮೂಲ್ಯ ಮೊದಲಾದವರು ಹಾಜರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಕರ್ಕೇರಾ ಕಿಚನ್ ಎಪ್ಲೈಯನ್ಸಸ್ ಕುಚಿನಾ ಕಿಚನ್ ಎಪ್ಲೈಯನ್ಸಸ್ನ ದ.ಕ. ಜಿಲ್ಲೆಯ ಅಧಿಕೃತ ವಿತರಕರಾಗಿದ್ದು ವಿನೂತನ ಮಾದರಿಯ ಚಿಮಿಣಿ, ಡಿಶ್ವಾಶ್, ಹಾಬ್ಸ್, ಓವೆನ್ಸ್, ಕುಕ್ಟಾಪ್ಸ್ಗಳು ಲಭ್ಯವಿದ್ದು ಭಾರತದಲ್ಲಿ ಮೊದಲ ಭಾರಿಗೆ ಫಿಲ್ಟರ್ಲೆಸ್ ಅಟೋ ಕ್ಲೀನ್ ತಂತ್ರಜ್ಞಾನವನ್ನು ಸಂಸ್ಥೆ ಪರಿಚಯಿಸುತ್ತಿದೆ. ಕರ್ಕೆರಾ ಇಂಜಿನಿಯರಿಂಗ್ ವರ್ಕ್ಸ್ ಅಲ್ಯೂಮಿನಿಯಂ ಹಾಗೂ ಸ್ಟೀಲ್ ಫ್ಯಾಬ್ರೀಕೇಷನ್ನಲ್ಲಿ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ಸೇವೆ ನೀಡುತ್ತಿದ್ದು ಇದೀಗ ಕುಚಿನಾ ಕಿಚನ್ ಎಪ್ಲೈಯನ್ಸಸ್ನ ಅಧಿಕೃತ ವಿತರಕಾಗಿಯೂ ಸೇವೆ ನೀಡಲಿದೆ.
ಕರ್ಕೇರಾ ಕಿಚನ್ ಎಪ್ಲೈನ್ಸಸ್ ನ ಉದ್ಘಾಟನ ಸಮಾರಂಭ
