ಮಡಂತ್ಯಾರು: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಚ್ಛ ಮೇವ ಜಯತೇ ಕಾರ್ಯಕ್ರಮದ ಅಂಗವಾಗಿ ಪರಿಸರ ದಿನಾಚರಣೆ ಮತ್ತು ಇ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಶಿಬಿರ ನಡೆಸಲಾಯಿತು. ಮಡಂತ್ಯಾರು ಗ್ರಾ. ಪಂ. ಪಿಡಿಒ ನಾಗೇಶ್ ಎಂ. ಇ- ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು ನಂತರ ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಗೋಪಾಲಕೃಷ್ಣ ಕೆ, ಗ್ರಾ.ಪಂ.ಸದಸ್ಯರಾದ ದಯಾನಂದ ಬಿ.ಕೆ. ಶಾಲಾಶಿಕ್ಷಕರಾದ ಕುಮುದ ಎಂ., ಪದ್ಮಜಾ ಬಿ.ಎಂ. , ನಿರಂಜನ್ ಜೈನ್, ಸತ್ಯಕಿರಣ್ ಕುಮಾರ್ ಮತ್ತು ಇತರ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಧರಣೆಂದ್ರ ಜೈನ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಪುಂಜಾಲಕಟ್ಟೆಯಲ್ಲಿ ಸ್ವಚ್ಛ ಮೇವಾ ಜಯತೆ
