ಬಂಟ್ವಾಳ: ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸುಧಾಕರ್, ಹಾಗೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾಪಕ ನಿರೀಕ್ಷಕರಾಗಿ ನಿವೃತ್ತರಾದ ಶಿವಣ್ಣ ನಾಯ್ಕ್ ಅವರಿಗೆ ಸನ್ಮಾನ ಕಾರ್ಯಕ್ರಮ ಸಮಾರಂಭ ಗುರುವಾರ ಸಂಜೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಂ ಭಟ್ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿದರು. ಅವರು ಮಾತನಾಡಿ ಅಧಿಕಾರಿಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಮಾಡಿದರೇ ಯಾರಿಗೂ ತಲೆತಗ್ಗಿಸುವ ಅಗತ್ಯ ಇರುವುದಿಲ್ಲ
ಎಂದರು. ಸರಕಾರಿ ಅಧಿಕಾರಿ ಸೇವೆಯಲ್ಲಿ ಇರುವಾಗ ಹಾಡಿ ಹೊಗಳುವುದು ಸಾಮಾನ್ಯ. ಆದರೆ ನಿವೃತ್ತಿಯ ಬಳಿಕ ಸಿಗುವ ಗೌರವದಿಂದ ನಾವು ಸೇವಾವಧಿಯಲ್ಲಿ ಹೇಗೆ ಕರ್ತವ್ಯ ನಿರ್ವಹಿಸದ್ದೇವೆ ಎನ್ನುವುದನ್ನು ಆತ್ಮವಲೋಕನ ಮಾಡಿಕೊಳ್ಳಲು ಸಾಧ್ಯವಿದೆ ಎಂದರು
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುಧಾಕರ್ ಅವರ ಪತ್ನಿ ಪ್ರಪುಲ್ಲಾ, ಶಿವಣ್ಣ ನಾಯ್ಕ್ ಅವರ ಪತ್ನಿ ಜಯಾ ಎಸ್ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಟಿ.ಶ್ಯಾಂ ಭಟ್ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಅಧಿಕಾರಿ ಡಾ.ಜಯರಾಜ್ ಪ್ರಕಾಶ್ ಸ್ವಾಗತಿಸಿದರು. ವಿಧಾನ ಸೌಧದ ನಿವೃತ್ತ ಅಧಿಕಾರಿ ವಿಶ್ವನಾಥ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ರಂಗಕಲಾವಿದ ಮಂಜು ವಿಟ್ಲ, ರಮೇಶ್ ನಾಯಕ್ ಸನ್ಮಾನ ಪತ್ರ ವಾಚಿಸಿದರು. ಸಾರಿಗೆ ಇಲಾಖೆಯ ಅಧೀಕ್ಷಕ ಸತೀಶ್ ವಂದಿಸಿದರು, ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ.ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ
