ಬಂಟ್ವಾಳ: ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಸವಿತಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.
1985ರಲ್ಲಿ ಕುಂದಾಪುರದ ಆಶ್ರಮದಲ್ಲಿ ದಿನಗೂಲಿ ನೌಕರರರಾಗಿ ವೃತ್ತಿ ಆರಂಭಿಸಿದ ಇವರು 1991ರಿಂದ ಜೋಡುಮಾರ್ಗ ವಸತಿಯಲ್ಲಿ ಶಾಲೆಯಲ್ಲಿ 28ವರ್ಷಗಳ ಕಾಲ ದಿನಗೂಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಮೋಹನ್ ಕುಮಾರ್ ಸನ್ಮಾನಿಸಿದರು. ಅವರು ಮಾತನಾಡಿ ಸೇವೆಯಲ್ಲಿ ಅತ್ಯಂತ ಹಿರಿಯ ಶಿಕ್ಷಕಿಯಾದರೂ ಸರಳ, ಸಜ್ಜನಿಕೆಯ ಇವರ ವ್ಯಕ್ತಿತ್ವ, ಸದಾ ಕ್ರಿಯಶೀಲರಾಗಿ ಲವಲವಿಕೆಯಿಂದ ಇರುವ ಇವರ ಗುಣ ಎಲ್ಲರಿಗೂ ಮಾದರಿ ಎಂದರು.
ವಸರಿಶಾಲೆಯ ಶಿಕ್ಷಕವೃಂದದವರು ಚಿನ್ನದ ಉಂಗುರ ತೊಡಿಸಿ ಗೌರವಿಸಿದರು. ವಸತಿ ಶಾಲೆಯ ಸಿಬ್ಬಂದಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿ.ಸಿ.ರೋಡಿನ ವಸತಿಶಾಲೆಯ ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ
