ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ದೇಯಿಬೈದಿತಿ ಅನ್ನಛತ್ರ ಲೋಕಾರ್ಪಣೆ ಮತ್ತು ಬ್ರಹ್ಮಬೈದರ್ಕಳ ಜಾತ್ರೋತ್ಸವ ಮಾ.1 ರಿಂದ ಮಾ.3ರವರೆಗೆ ನಡೆಯಲಿದೆ.
ಮಾ.೧ರಂದು ಶುಕ್ರವಾರ ಬೆಳಿಗ್ಗೆ ಚಿತ್ರಕೂಟ ನಾಗಬನ ಮತ್ತು ಒಂಟಿ ನಾಗಬನದಲ್ಲಿ ಆಶ್ಲೇಷ ಬಲಿ ಮತ್ತು ನಾಗತಂಬಿಲ ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ವೈದ್ಯನಾಥ, ಮಹಿಸಂದಾಯ, ರಕ್ತೇಶ್ವರೀ ದೈವಗಳ ನೇಮೋತ್ಸವ ನಡೆಯಲಿದೆ. ಮಾ.2ರಂದು ಶನಿವಾರ ಸಂಜೆ 6.30ಕ್ಕೆ ಪಂಜಿಕಲ್ಲು ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಶ್ರೀ ಕ್ಷೇತ್ರಕ್ಕೆ ಬಂದು ಅದೇ ಸಮಯಕ್ಕೆ ಕ್ಷೇತ್ರದಲ್ಲಿ ಬೈದರ್ಕಳು, ಕೊಡಮಣಿತ್ತಾಯ ದೈವವನ್ನು ಬಿರುದಾವಳಿಗಳಿಂದ ಇದಿರುಗೊಂಡು ಶ್ರೀ ಕ್ಷೇತ್ರಕ್ಕೆ ಬರಮಾಡಿಸುವುದು, ಮುಕ್ಕಡ ಭಂಡಾರ ಮನೆಯಿಂದ ಕಲ್ಕುಡ, ಕಲ್ಲುರ್ಟಿ ದೈವದ ಭಂಡಾರ ಶ್ರೀ ಕ್ಷೇತ್ರದ ಮಾಡಕ್ಕೆ ಆಗಮಿಸಲಿದೆ.
ವಿಶೇಷ ಸಂಕ್ರಾಂತಿ ಸೇವೆ ನಡೆದು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೇಲ್ದೋಡಿಡ್ ಗೌಜಿ ನಡೆಯಲಿದೆ. ಮಾ.3ರಂದು ಆದಿತ್ಯವಾರ ರಾತ್ರಿ ೮ಕ್ಕೆ ದೇಯಿ ಬೈದಿತ ಅನ್ನಛತ್ರ ಲೋಕಾರ್ಪಣೆಗೊಳ್ಳಲಿದೆ. 8.30ಕ್ಕೆ ಬೈದರ್ಕಳು ಒಲಿಮರೆಯಿಂದ ಹೊಡರುವುದು, 10.30ಕ್ಕೆ ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಮುಂಜಾನೆ ಗಂಟೆ 4ಕ್ಕೆ ಬೈದರ್ಕಳು ಪಾತ್ರಿಗಳು ದರ್ಶನ ಆಗಿ ಸುರ್ಯ ಹಾಕಿಕೊಳ್ಳುವುದು ಬಳಿಕ ಮಾಯಾಂದಾಲೆ ದೈವದ ನೇಮೋತ್ಸವ ನಡೆಯಲಿದೆ. ಮಾ.4ಕ್ಕೆ ಸೋಮಾವರ ಕುಟುಂಬದ ದೈವಗಳಿಗೆ ಕೋಲ ಬಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.