ಬಂಟ್ವಾಳ: ಮೋದಿ ಅಭಿಮಾನಿಯೊಬ್ಬರು ಒಂದೂವರೆ ವರ್ಷದಿಂದ ಗಡ್ಡ ಹಾಗೂ ಕೂದಲು ಬೆಳೆಸಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ದಿನದಂದೇ ಗಡ್ಡ ಬೋಳಿಸಲು ನಿರ್ಧರಿಸಿದ್ದಾರೆ.
ಬಂಟ್ವಾಳ ತಾಲೂಜು ಗ್ಯಾರೇಜು ಮಾಲಕರ ಸಂಘದ ಕೋಶಾಧಿಕಾರಿ, ಬಾಲಾಜಿ ಸರ್ವಿಸ್ ಸ್ಟೇಷನ್ನಿನ ಮಾಲಕ ಪ್ರಶಾಂತ್ ಭಂಡಾರ್ಕಾರ್ ಎಂಬರು ಮೋದಿ ಗೆಲುವಿಗಾಗಿ ಕಳೆದ ಒಂದೂವರೆ ವರ್ಷದಿಂದ ಗಡ್ಡ, ಹಾಗೂ ಕೂದಲಿಗೆ ಕತ್ತರಿ ಹಾಕದೆ ಉದ್ದಕ್ಕೆ ಬೆಳೆಸಿಕೊಂಡು ಬಂದಿದ್ದಾರೆ. ಇದೀಗ ಮೋದಿ ಚುನಾವಣೆಯಲ್ಲಿ ಗೆದ್ದಿದ್ದು ಮೇ.30ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವುದರಿಂದ ಅದೇ ದಿನ ತನ್ನ ಗಡ್ಡ ಹಾಗೂ ಕೂದಲನ್ನು ಬೋಳಿಸಲಿದ್ದಾರೆ
ಮೋದಿ ಗೆಲುವಿಗಾಗಿ ಗಡ್ಡ ಬೆಳೆಸಿದ ಬಂಟ್ವಾಳದ ಅಭಿಮಾನಿ
