ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜನರಿಗೆ ನೀರು ಸರಬರಾಜು ಮಾಡುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ ಜಕ್ರಿಬೆಟ್ಟು ನದಿ ಕಿನಾರೆಯಲ್ಲಿದ್ದು ಜಾಕ್ವೆಲ್ ಪ್ರದೇಶದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು ನದಿಯಲ್ಲಿ ನೀರಿನ ಹರಿವು ಕೂಡ ನಿಂತು ಹೋಗಿರುವುದರಿಂದ ಮೇ.17ರಿಂದ 2 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ನಿಯಮಿತವಾಗಿ ನೀರಿನ ಬಳಕೆ ಮಾಡುವಂತೆ ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸಭೆಯ ಜನರಿಗೆ 2 ದಿನಕ್ಕೊಮ್ಮೆ ನೀರು
