
ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ರಾಯರ ಚಾವಡಿಯ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಜ.24 ಮತ್ತು 25ರಂದು ನಡೆಯಲಿದೆ.
ಜ.24 ಶುಕ್ರವಾರ ಬೆಳಿಗ್ಗೆ ಗಣಹೋಮ, ನೇಮೋತ್ಸವದ ಮುಹೂರ್ತ, ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪೂಜೆ, ಶ್ರೀ ನಾಗಸನ್ನಿಧಿಯಲ್ಲಿ ನಾಗತಂಬಿಲ, ಮಧ್ಯಾಹ್ನ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಹಾಪೂಜೆ, ಅಶ್ವತ್ಥ ಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಅಶ್ವತ್ಥ ನಾರಾಯಣ ಕಟ್ಟೆ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ನಡೆಯಲಿದೆ.
ಸಂಜೆ 4ಕ್ಕೆ ದೈವಸ್ಥಾನದಲ್ಲಿ ನವಕ ಪ್ರಧಾನ ಹೋಮ, ರಾತ್ರಿ ಶ್ರೀ ಮುಖ್ಯಪ್ರಾಣ ದೇವರ ಸನ್ನೀದಿಯಲ್ಲಿ ರಂಗಪೂಜೆ, ದೈವಸ್ಥಾನದಿಂದ ನೇಮೋತ್ಸವ ಗದ್ದೆಗೆ ಭಂಡಾರ ಹೊರಡುವುದು, ರಾತ್ರ್ರಿ 9.30ಕ್ಕೆ ಶ್ರೀ ಪಿಲಿಚಾಮುಂಡಿ ಕಲ್ಕುಡ ದೈವಗಳಿಗೆ ನೇಮೋತ್ಸವ, 12.30ಕ್ಕೆ ಶ್ರೀ ಪಿಲಿಚಾಮುಂಡಿ ಕಲ್ಕುಡ ದೈವಗಳ ವಲಸರಿ ನಡೆಯಲಿದೆ.
ಜ.25ಶನಿವಾರ ಸಂಜೆ 5.30ಕ್ಕೆ ಶ್ರೀ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ, ಗಂಟೆ 9ಕ್ಕೆ ಶ್ರೀ ಪಂಜುರ್ಲಿ-ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.
