ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೊತಿಷಿ ಅನಿಲ್ ಪಂಡಿತ್ ಮಾತನಾಡಿ
ದೇವರ ನಾಮ ಸ್ಮರಣೆಯಿಂದ ಪಾಪಗಳು ಪರಿಹಾರವಾಗುತ್ತದೆ. ನಿತ್ಯ ದೇವತಾ ಕಾರ್ಯಕ್ರಮಗಳ ಮೂಲಕ ನಮ್ಮನ್ನು ನಾವು ತೊಡಗಿಸಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುದರ ಸುಜೀರು ದೈಯ್ಯಡ್ಕ, ಯತೀನ್, ದಾಮೋದರ ಸಪಲ್ಯ
ತಾರಾನಾಥ ಕುಲಾಲ್ ಅವರನ್ನು ಗೌರವಿಸಲಾಯಿತು.
ಉದ್ಯಮಿ ಜಗದೀಶ್ ರೈ, ಗೌರವಾಧ್ಯಕ್ಷ ಆಶಿತ್ ಶೆಟ್ಟಿ, ಪ್ರಸಾದ್ ಸುಜೀರು, ಜಗದೀಶ್ ಕುಮ್ಡೇಲು , ಅಧ್ಯಕ್ಷ ರಾಮಕೃಷ್ಣ ಶೆಟ್ಟಿ ಸುಜೀರು ಹೊಸಮನೆ, ವಿಶು ಕುಮಾರ್, ಸುಂದರ ಗುರಿಕಾರ ಭಾಗವಹಿಸಿದ್ದರು.
ಕೋಶಾಧಿಕಾರಿ ನಾಗೇಶ್ ಅಮೀನ್ ಸ್ವಾಗತಿಸಿದರು, ದತ್ತನಗರ ವೀರ ಹನುಮಾನ್ ಮಂದಿರದ ಅಧ್ಯಕ್ಷ ಸುರೇಂದ್ರ ಕಂಬಳಿ ಸುಜೀರು ಬೀಡು ಪ್ರಾಸ್ತವಿಕವಾಗಿ ಮಾತನಾಡಿದರು. ಗಣೇಶ್ ದತ್ತನಗರ ಕಾರ್ಯಕ್ರಮ ನಿರೂಪಿಸಿದರು.
ವೇದಮೂರ್ತಿ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಸಾಮುಹಿಕ ಶನೈಶ್ಚರ ಪೂಜೆ ನಡೆಯಿತು. ಬಳಿಕ ಮಹಾಪೂಜೆ ನಡೆದು ಅನ್ನಸಂರ್ಪಣೆ ನಡೆಯಿತು.