
ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಕಾರ್ಯಕ್ರಮವು ಡಿ.28 ಶನಿವಾರ ಮತ್ತು ಡಿ.29 ಭಾನುವಾರ ನಡೆಯಲಿದೆ.
ಡಿ.27 ರಂದು ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಳು ಆರಂಭಗೊಳ್ಳಲಿದೆ.

ಡಿ.28 ರಂದು ಬೆಳಿಗ್ಗೆ 7.30 ಕ್ಕೆ ಗಣಹೋಮ, 8.30 ಕ್ಕೆ ದೈವದ ಭಂಡಾರ ಏರಲಿದೆ. 9.30ಕ್ಕೆ ಸಾಮೂಹಿಕ ಶನೈಶ್ಚರ ಪೂಜೆ ನಡೆಯಲಿದೆ. 11 ಗಂಟೆಗೆ ಮಹಾಪೂಜೆ ನಡೆದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆಯಾಗಿ ಅನ್ನದಾನ ನಡೆಯಲಿದೆ. ಅಂದು ರಾತ್ರಿ 10 ಗಂಟೆಗೆ ಶ್ರೀದೈವರಾಜ ಕೋರ್ದಬ್ಬು ತನ್ನಿಮಾನಿಗ ದೈವಕ್ಕೆ ನೇಮ ನಡೆಯಲಿದೆ. ಡಿ.29 ರಂದು ಸಂಜೆ 5 ಗಂಟೆಗೆ ರಾಹು ಗುಳಿಗ ದೈವಕ್ಕೆ ಹಾಗೂ ರಾತ್ರಿ 9 ಗಂಟೆಗೆ ಗುಳಿಗ ಪಂಜುರ್ಲಿ ದೈವಕ್ಕೆ ನೇಮ ನಡೆಯಲಿದೆ.
Advertisement







